ಆಂಡ್ರೆಡೆ, ಎಡ್ವರ್ಡ್ ನೆವಿಲ್ಲೆ ದ ಕೋಸ್ಟ
ಇಂಗ್ಲೆಂಡಿನ ಭೌತಶಾಸ್ತ್ರಜ್ಞ. ಲಂಡನ್, ಹೈಡೆಲ್‍ಬರ್ಗ್, ಕೇಂಬ್ರಿಜ್ ಮತ್ತು ಮ್ಯಾಂಚೆಸ್ಟರ್‍ಗಳಲ್ಲಿ ಶಿಕ್ಷಣ ಪಡೆದು, ವೂಲ್‍ಪಿಚ್‍ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದ. 1928ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ಸೇರಿದ. 1935ರಲ್ಲಿ ಈತನಿಗೆ ಎಫ್.ಆರ್.ಎಸ್. ಗೌರವ ದೊರಕಿತು. ಪರಮಾಣುರಚನೆಗೆ ಸಂಬಂಧಿಸಿದಂತೆ ಈತ ಮಾಡಿದ ಕೆಲಸ ಇವನಿಗೆ ಖ್ಯಾತಿಯನ್ನು ತಂದಿದೆ. 1950ರಲ್ಲಿ ರಾಯಲ್ ಇನ್‍ಸ್ಟಿಟ್ಯೂಟ್ ಮತ್ತು ಡೇವಿ-ಫ್ಯಾರಡೆ ಪ್ರಯೋಗಶಾಲೆಯ ನಿರ್ದೇಶಕನಾದ. ದಿ ಸ್ಟ್ರಕ್ಚರ್ ಆಫ್ ದಿ ಆಟಂ-ಮುಂತಾದ ಪುಸ್ತಕಗಳನ್ನು ಬರೆದಿದ್ದಾನೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ